Wednesday, February 2, 2011

ಮಾತು ಮೌನವಾಯಿತು




ಮಾತಾಡುವ ಮನಸೊಂದು ಮೂಕವಾಗಿ
ಮಾತು ಮೌನವಾಯ್ತು..!
ಕಗ್ಗಲ್ಲಾಗಿರುವ ಶಿಲೆಯೊಂದು ಅಳಲಾರದೆ
ಮಾತು ಮೌನವಾಯ್ತು..!

ಮರೆಯದ ಕಹಿ ನೆನಪುಗಳು ಕಾಡುತಿರಲು
ಮಾತು ಮೌನವಾಯ್ತು..!
ನಲಿವ ನಲಿವೊಂದು ದುಃಖವ ಮರೆಯಲು
ಮಾತು ಮೌನವಾಯ್ತು..!

ಪ್ರೀತಿಯ ಮಾತು ಹಂಚಿ ಕೊಳ್ಳಲಾಗದೆ
ಮಾತು ಮೌನವಾಯ್ತು..!
ಒಡೆದ ಹೃದಯದಲಿ ಪ್ರೀತಿ ಮೂಡಿಸುವ
ಮಾತು ಮೌನವಾಯ್ತು..!





ಮನಸಿನ ಭಾವ ನುಡಿಸುವ ಮಾತು
ನೀ ಮೌನವಾದರೆ..

ಬರಡು ಮೌನಕೆ ನೀರುಣಿಸುವ ಮಾತು
ನೀ ಮೌನವಾದರೆ..

ಒಲವಿನ ಲಹರಿಯಾಗಿರುವ ಮಾತು
ನೀ ಮೌನವಾದರೆ..

ಹಿತನುಡಿ ಹೇಳಬಯಸುವ ಮಾತು
ನೀ ಮೌನವಾದರೆ..

ಮೂಕಮನಸ ಮಾತಾಡಿಸುವ ಮಾತು
ನೀ ಮೌನವಾದರೆ..

ಮನಸಿನ ಮಾತು ನೀ ಮೌನಿಯಾದರೆ
ಮಧುರ ಭಾವಗಳು ಮೂಕವಾಗುವವು..

ಮಾತು ಮೌನಕೆ ಶರಣಾದರೆ ಮನಸಿನ
ಹರುಷಗಳು ಮೌನಕೆ ಬಲಿಯಾಗುವವು..

ಮನಸೇ ಮನಸಾ ಅರಿತು ನೀ ನೋಡು
ಮನಸಿನ ಮಾತು ಮಧುರವೀ ಹಾಡು..





ಮುಂಜಾನೆಯ ಮಂಜು