ಸ್ನೇಹಾನಾ... ಪ್ರೀತೀನಾ...?
Wednesday, February 9, 2011
Wednesday, February 2, 2011
ಮಾತು ಮೌನವಾಯಿತು
ಮಾತಾಡುವ ಮನಸೊಂದು ಮೂಕವಾಗಿ ಮಾತು ಮೌನವಾಯ್ತು..! ಕಗ್ಗಲ್ಲಾಗಿರುವ ಶಿಲೆಯೊಂದು ಅಳಲಾರದೆ ಮಾತು ಮೌನವಾಯ್ತು..! ಮರೆಯದ ಕಹಿ ನೆನಪುಗಳು ಕಾಡುತಿರಲು ಮಾತು ಮೌನವಾಯ್ತು..! ನಲಿವ ನಲಿವೊಂದು ದುಃಖವ ಮರೆಯಲು ಮಾತು ಮೌನವಾಯ್ತು..! ಪ್ರೀತಿಯ ಮಾತು ಹಂಚಿ ಕೊಳ್ಳಲಾಗದೆ ಮಾತು ಮೌನವಾಯ್ತು..! ಒಡೆದ ಹೃದಯದಲಿ ಪ್ರೀತಿ ಮೂಡಿಸುವ ಮಾತು ಮೌನವಾಯ್ತು..! ಮನಸಿನ ಭಾವ ನುಡಿಸುವ ಮಾತು ನೀ ಮೌನವಾದರೆ.. ಬರಡು ಮೌನಕೆ ನೀರುಣಿಸುವ ಮಾತು ನೀ ಮೌನವಾದರೆ.. ಒಲವಿನ ಲಹರಿಯಾಗಿರುವ ಮಾತು ನೀ ಮೌನವಾದರೆ.. ಹಿತನುಡಿ ಹೇಳಬಯಸುವ ಮಾತು ನೀ ಮೌನವಾದರೆ.. ಮೂಕಮನಸ ಮಾತಾಡಿಸುವ ಮಾತು ನೀ ಮೌನವಾದರೆ.. ಮನಸಿನ ಮಾತು ನೀ ಮೌನಿಯಾದರೆ ಮಧುರ ಭಾವಗಳು ಮೂಕವಾಗುವವು.. ಮಾತು ಮೌನಕೆ ಶರಣಾದರೆ ಮನಸಿನ ಹರುಷಗಳು ಮೌನಕೆ ಬಲಿಯಾಗುವವು.. ಮನಸೇ ಮನಸಾ ಅರಿತು ನೀ ನೋಡು ಮನಸಿನ ಮಾತು ಮಧುರವೀ ಹಾಡು.. ಮುಂಜಾನೆಯ ಮಂಜು |
Thursday, January 13, 2011
Wednesday, January 5, 2011
ಕಳೆದು ಹೋಗಿರುವೆ ನಾ!
ನನ್ನುಸಿರಿನ ಗೆಳತಿ
I MISS U.. ನನ್ನುಸಿರಿನಲಿ ಬೆರೆತ ಗೆಳೆತಿಯೇ ಕೇಳು ನೀ.. ಈ ನಿನ್ನ ಗೆಳಯನ ವೇದನೆ ನಿನಗೆ ತಿಳಿದಿಲ್ಲವೆ ನಿನ್ನ ನೆನಪು ಮನಕೆ ಬೆರೆತು ಬಸವಳಿಯುತಿದೆ ನೀನಿಲ್ಲದ ಕ್ಷಣಗಳ ಕಳೆಯಲು ನಿಶ್ಯಕ್ತನಾಗಿರುವೆ. ನನ್ನೀ ಮನದ ಮರುಭೂಮಿಗೆ ಸಿಹಿನೀರ್ಗೆರೆಯು ನೀ.. ಬಿರುಬಿಸಿಲಿನಲು ಬರಿದಾದ ಮನವ ತಣಿಸುತ್ತಿದ್ದೆ ನೀ.. ನಗುವಿನ ಅಲೆಯಲಿ ನೋವುಗಳ ಮರೆಸುತ್ತಿದ್ದೆ ನೀ.. ನನ್ನ ನೆನಪುಗಳ ಸರಪಣಿಯಲಿ ಬಂದಿಯಾಗಿದ್ದೆ ನೀ.. ಮನಸಲಿ ನಿನ್ನ ನೆನಪುಗಳ ಹಿಮಪಾತವೇ ಆಗುತಿದೆ ಆಸರೆ ಇಲ್ಲದ ನನ್ನೀ ಕಣ್ಣಲಿ ಕಣ್ಣೀರು ಹರಿಯುತಿದೆ ನೀನಿಲ್ಲದ ಕ್ಷಣವ ಸವೆಯುತ ಮನಸು ಬರಿದಾಗುತಿದೆ ಇನ್ನಾದರೂ ನೀ ಬಾ ಗೆಳತಿ ನನ್ನ ಜೀವನದಿಯಾಗಿ.. ***Munjaaneya Manju*** |
Wednesday, December 29, 2010
Friday, December 17, 2010
Subscribe to:
Posts (Atom)