Friday, December 10, 2010

ಇದೇನಾ... ಪ್ರೀತಿ..?


ಣ್ಮುಚ್ಚಿ ತೆರೆಯುವಲ್ಲಿ ದೇವತೆಯು ಬಂದು ಹೋದಹಾಗೆ,
ನನ್ನ ಕಣ್ಣೆದುರು ಅವಳೇ ಬಂದು ನಿಂತಿರುವಳು
ಕೊಡೆಯಿಲ್ಲದ ವೇಳೆಯಲ್ಲಿ ಭೋರ್ಗರೆವ ಮಳೆಯ ಹಾಗೆ,
ನನ್ನ ಹೃದಯದಿ ಇದುವೆ ಪ್ರೀತಿ ಎಂದಿಹಳು...


ನಿನ್ ಹೆಸರು ತಿಳಿಯದು, ನಿನ್ನೂರು ತಿಳಿಯದು
ಅಂದವಾದ ಪಾತರಗಿತ್ತಿಗೆ ಹೆಸರಿಡಬೇಕೇ..?
ನೀ ನನ್ನ ನೋಡದೆಯೆ ನಾ ನಿನ್ನ ನೋಡುತಿರುವೆನು
ನದಿಯಲ್ಲಿನ ಬಿಂಬವು ಚಂದ್ರನಿಗೆ ತಿಳಿಯುವುದೇ..?


ಬೀದಿಯಲ್ಲಿ ನೀ ಬಂದರೆ ಬೀದಿದೀಪವು ಕಣ್ಹೋಡೆಯುವವು
ಸೂರ್ಯ ಕೂಡ ಮನೆಗೆ ಹೋಗಲು ಹಠ ಹಿಡಿಯುವನು
ನದಿಯಲ್ಲಿ ನೀ ಇಳಿದರೆ ಮೀನಿಗು ಬಯಾರಿಕೆ ಬರುವುದು
ನಿನ್ನ ತೊಡಲೆಂದೆ ಆ ಮಳೆ ಹನಿಯು ಕಾಯುತಿರುವುದು


ಭೂಕಂಪವಾದರು ಕದಲದ ಗುಂಡಿಗೆ ನನ್ನದು
ಹೂ ಒಂದು ಸೋಕಿದಾಗ ಪಕ್ಕಕ್ಕೆ ಸರಿದಿದೆ ಇಂದು
ಹೃದಯದಿ ನಿನ್ನ ಚಿತ್ರವ ಬಿಡಿಸುತಿಹೆನು..
ಉಸಿರೊಳಗೊಂದುಸಿರ ಹೊರುತಿಹೆನು..


         ಇದೇನಾ... ಪ್ರೀತಿ..?

Saturday, November 27, 2010

ನಾ ಮರೆಯುವ ನೆನಪು..



ನನ್ನೀ ಹೃದಯಕೆ ನಿನ್ನದೇ ಬಯಕೆಯೇ
ಆದರೂ ನಾ ನಿನ್ನ ಒಲಿಸಲಾಗಲಿಲ್ಲವೆ
ನಾ ಇರುಳಂತಿರುವೆ ನೀ ಹಗಲಾಗಿರುವೆ
ಇಬ್ಬರು ಸೇರಿಯೂ ಜೊತೆಗಿರಲಾರೆವೆ

ಕನಸೆಲ್ಲವ ಸೇರಿಸಿ ನಿನ್ನ ಅಲಂಕರಿಸಿರುವೆ
ಕನಸಿನಲ್ಲಿ ಗಾಜಿನ ಅರಮನೆಯ ಕಟ್ಟಿರುವೆ
ನೀ ವಾಸಿಸದ ಅರಮನೆಯು ಸೆರೆಮನೆಯಾಗಿದೆ
ನಾ ಬಚ್ಚಿಟ್ಟ ಕನಸೇ ಹೃದಯವ ನೋಯಿಸುತಿದೆ.

ನನ್ನ ಮಧುರ ಕ್ಷಣಗಳ ಸರಪಣಿಯಲಿ ನೀನಿರುವೆ
ಪ್ರತಿ ಬಾರಿ ಕನಸಲೂ ನಿನ್ನನೇ ಕಾಣ ಬಯಸುವೆ
ಮಬ್ಬಾಗಿರುವ ಚಿತ್ರಗಳಲ್ಲೂ ನಿನ್ನದೆ ಪ್ರತಿಬಿಂಬವೆ
ನಿನ್ನದೇ ಸುವಾಸೆನೆಯು ನನ್ನುಸಿರಲಿ ಅಡಗಿದೆಯೆ.

ನಾನಿನ್ನ ಆಸರೆಯಾಗಿದ್ದರು ನಿನ್ನ ಜೊತೆಗಿರಲಾರೆನೆ
ಈ ಪಯಣದಲ್ಲಿದ್ದರು, ಪ್ರತಿ ಪಯಣದಲ್ಲಿರಲಾರೆನೆ
ನೀ ಸಂತೋಷದಿಂದಿರಲೆಂದು ಪ್ರತಿದಿನ ಪ್ರಾರ್ಥಿಸುವೆನೆ.
ನಾ ಮರೆಯುವ ನೆನಪು ನೀನೇ.. ಆಗಿರುವೆಯೆ...

ಮುಂಜಾನೆಯ ಮಂಜು ™