Wednesday, January 5, 2011

ಕಳೆದು ಹೋಗಿರುವೆ ನಾ!ಕಳೆದು ಹೋಗಿರುವೆ ನಾ!


ಕಳೆದು ಹೋಗಿರುವೆ ನಾ ನೆನ್ನೆಯಿಂದ
ನನ್ನ ಹುಡುಕುತಿರುವೆ ಗಾಳಿಯಾಸರೆಯಿಂದ
ಉಸಿರು ಹೊರಟಿದೆ ನಿನ್ನೊಲವಿನಾಸೆಯಿಂದ

ನಾ ನೆರಳಿಲ್ಲದವನೆಂದು ನಿನಗೆ ಗೊತ್ತಿಲ್ಲವೆ
ನನ್ನ ನೆರಳೇ ನೀನಾಗಿರುವೆಂದು ತಿಳಿದಿಲ್ಲವೆ
ನನ್ನ ಒಡಲು ನೆರಳನ್ನು ಸೇರಲಾಗುವುದಿಲ್ಲವೆ

ಆಹಾರವಿಲ್ಲದ್ದಿದ್ದರು ಬದುಕುವೆ, ನಿನ್ನೆಸರ ನೆನೆದರೆ
ಕಿಚ್ಚಿಲ್ಲದೆ ಕಿಚ್ಚೇರುವುದು ನಮ್ಮ ಕಂಗಳು ಸಂದಿಸಿದರೆ
ನಿನ್ನ ಉಸಿರ ಗಾಳಿಯಲ್ಲಿ ನಾನು ಬಾಳುತಿರುವೆನೆ

ನಿಮಿಷಗಳು ವರುಷಗಳಾಗಿವೆ ನೀನಿರೆ ದೂರದಿ
ವರುಷಗಳು ನಿಮಿಷಗಳಾಗಿವೆ ನೀನಿರೆ ಸನಿಹದಿ
ನನ್ನ ನೀ ಪ್ರೀತಿಸದಿದ್ದರೂ ಸುಳ್ಳೊಂದ ನುಡಿ ನೀ,
ಈ ಜೀವ ಉಳಿಯುವುದು, ನಿನ್ನ ಪ್ರೀತಿ ನಿಜವೇ ಆದರೆ...


ಮುಂಜಾನೆಯ ಮಂಜು™

5 comments:

 1. Super Manju
  nee barediruva kavana nange thumbha esta aguthe.

  heartge thumbha touch aguthe, aste feel kuda agtidhe.

  ReplyDelete
 2. ಮಂಜನ ಹಿಂದೊಂದು ಮಮತೆಯಿದೆ,
  ಮಮತೆಯ ಹಿಂದೊಂದು ಹೃದೆಯವಿದೆ,
  ಹೃದೆಯದ ಹಿಂದೊಂದು ಕವಿತ್ವವಿದೆ,
  ಕವಿತ್ವದ ಹಿಂದೊಬ್ಬ ಕವಿಯಿದ್ದಾನೆ ,
  ಕವಿಯೋಳಗೊಬ್ಬ ಪ್ರೇಮಿ ಇದ್ದಾನೆ ,
  ಪ್ರೆಮಿಸುತ್ತಲೇ ಸ್ನೇಹದಿಂದಿದ್ದಾನೆ,
  ಸ್ನೇಹತ್ವದಲ್ಲೇ ನನ್ನ ಮಿತ್ರನಾಗಿದ್ದಾನೆ,
  ಪ್ರಿಯ ಗೆಳೆಯ ಪ್ರೀತಿಯ ಮಂಜ...

  ReplyDelete
 3. ನನ್ನ ಕವನ ನಿಮಗೆ ಇಷ್ಟು ಭಾವನಾತ್ಮಕವಾಗಿರುತ್ತೆ ಅಂತ ನನಗೆ ಗೊತ್ತಿರಲಿಲ್ಲ.. ಧನ್ಯವಾದಗಳು ನನ್ನ ಆತ್ಮೀಯರೆ

  ReplyDelete
 4. complete blog is super duper.... ಅದರಲ್ಲೂ ನೀನ್ ಪ್ರೊಫೈಲ್ ಟೈಟಲ್ ಕಾರ್ಡ್ ಅಂತು ಮಸ್ತ್ ಮಸ್ತ್

  ReplyDelete
 5. ತುಂಬು ಹೃದಯದ ಧನ್ಯವಾದಗಳು...

  ReplyDelete