Wednesday, January 5, 2011

ನನ್ನುಸಿರಿನ ಗೆಳತಿ





I MISS U..

ನನ್ನುಸಿರಿನಲಿ ಬೆರೆತ ಗೆಳೆತಿಯೇ ಕೇಳು ನೀ..
ಈ ನಿನ್ನ ಗೆಳಯನ ವೇದನೆ ನಿನಗೆ ತಿಳಿದಿಲ್ಲವೆ
ನಿನ್ನ ನೆನಪು ಮನಕೆ ಬೆರೆತು ಬಸವಳಿಯುತಿದೆ
ನೀನಿಲ್ಲದ ಕ್ಷಣಗಳ ಕಳೆಯಲು ನಿಶ್ಯಕ್ತನಾಗಿರುವೆ.

ನನ್ನೀ ಮನದ ಮರುಭೂಮಿಗೆ ಸಿಹಿನೀರ್ಗೆರೆಯು ನೀ..
ಬಿರುಬಿಸಿಲಿನಲು ಬರಿದಾದ ಮನವ ತಣಿಸುತ್ತಿದ್ದೆ ನೀ..
ನಗುವಿನ ಅಲೆಯಲಿ ನೋವುಗಳ ಮರೆಸುತ್ತಿದ್ದೆ ನೀ..
ನನ್ನ ನೆನಪುಗಳ ಸರಪಣಿಯಲಿ ಬಂದಿಯಾಗಿದ್ದೆ ನೀ..

ಮನಸಲಿ ನಿನ್ನ ನೆನಪುಗಳ ಹಿಮಪಾತವೇ ಆಗುತಿದೆ
ಆಸರೆ ಇಲ್ಲದ ನನ್ನೀ ಕಣ್ಣಲಿ ಕಣ್ಣೀರು ಹರಿಯುತಿದೆ
ನೀನಿಲ್ಲದ ಕ್ಷಣವ ಸವೆಯುತ ಮನಸು ಬರಿದಾಗುತಿದೆ
ಇನ್ನಾದರೂ ನೀ ಬಾ ಗೆಳತಿ ನನ್ನ ಜೀವನದಿಯಾಗಿ..



***Munjaaneya Manju***

2 comments:

  1. Eli bartale jeevanadiyagi,

    hogtidale bittu, i mis my frd lot....

    ReplyDelete
  2. nim kavana hodhidha mele, bardhe irthala?

    ReplyDelete